ಕುರಿತೋದದೆಯುಂ ಕಾವ್ಯ(!?) ಪ್ರಯೋಗ ಮಾಡುವ ಪ್ರಯತ್ನ ನನ್ನದು.
ಹನಿಗವನ ಹಾಗೂ ಇತರ ಕವನಗಳೇ ಈ ಬ್ಲಾಗ್ನಲ್ಲಿ ಪ್ರಧಾನ ಪಾತ್ರದಲ್ಲಿದ್ದರೂ,
ಬ್ಲಾಗನ್ನು ಇದಕ್ಕೆ ಸೀಮಿತಗೊಳಿಸದೆ ಇನ್ನಷ್ಟು ಮತ್ತಷ್ಟು ವಿಶೇಷವಾಗಿಸುವ ಬಯಕೆಯಿದೆ.
ಎಲ್ಲದರಲ್ಲೂ ಕೈ ಹಾಕಿ (ಕೈ ಸುಟ್ಟುಕೊಳ್ಳದೆ) ರುಚಿ ನೋಡಬೇಕೆಂಬ ಉತ್ಸಾಹ ನನ್ನದು.
ಬ್ಲಾಗನ್ನು ಸದಾ ಆಕರ್ಷಕವಾಗಿರಿಸಲು ಪ್ರಯತ್ನಿಸುತ್ತೇನೆ. ಸಲಹೆ ಸೂಚನೆಗಳಿಗೆ ಸ್ವಾಗತ.