ಎಲ್ಲರಿಗೂ ವರ್ಷದ ಮೊದಲ ಹಬ್ಬ, ಸಂಕ್ರಾಂತಿಯ ಶುಭಾಷಯಗಳು.
ವರ್ಷದ ಮೊದಲಲ್ಲಿ ಮಾಡುವೆವು ಪ್ರತಿಜ್ಞೆ
ಮಾಡಬೇಕು some ಕ್ರಾಂತಿ.
ಆದರೆ ಕೊನೆಗೆ ಆಗುವುದು ಬರೇ ಸಂಕ್ರಾಂತಿ!
ಈ ಬಾರಿ ಹೀಗಾಗದಿರಲಿ, ಎಲ್ಲರ ಸಂಕಲ್ಪ ಹಾಗು ಬಯಕೆಗಳು ಈಡೇರಲಿ..
15 January 2011
ಜೇನು ಕಡಿದಂತೆ..!
ಡುಂಡಿರಾಜ್ ರವರ ಮತ್ತಷ್ಟು ಹನಿಗವನಗಳು..
-------------------------
ಪ್ರೇಯಸಿಯ ಫೋನ್ ಬಂದರೆ
ಜೇನು ಕುಡಿದಂತೆ,
ಹೆಂಡತಿಯ ಫೋನ್ ಬಂದರೆ
ಜೇನು ಕಡಿದಂತೆ!
--------------------------
ನಿಜ ಗೆಳೆಯಾ,
ನುಡಿದರೆ ಮುತ್ತಿನ ಹಾರದಂತಿರಬೇಕು.
ಆದರೆ ಸ್ವಲ್ಪ ಎಚ್ಚರ,
ಎಂಜಲು ಹಾರದಂತಿರಬೇಕು!
-----------------------------------
-------------------------
ಪ್ರೇಯಸಿಯ ಫೋನ್ ಬಂದರೆ
ಜೇನು ಕುಡಿದಂತೆ,
ಹೆಂಡತಿಯ ಫೋನ್ ಬಂದರೆ
ಜೇನು ಕಡಿದಂತೆ!
--------------------------
ನಿಜ ಗೆಳೆಯಾ,
ನುಡಿದರೆ ಮುತ್ತಿನ ಹಾರದಂತಿರಬೇಕು.
ಆದರೆ ಸ್ವಲ್ಪ ಎಚ್ಚರ,
ಎಂಜಲು ಹಾರದಂತಿರಬೇಕು!
-----------------------------------
ಗುಂಡಿಗೆ
ಗುಂಡಿಗೆ ಎಂಬ ಒಂದೇ ಪದವನ್ನು ನಾಲ್ಕು ಅರ್ಥದಲ್ಲಿ ಬಳಸಿದ ಚಟಾಕಿ ನಿಮ್ಮ ಮುಂದೆ.
ನಿನ್ನ ನೋಟದ ಗುಂಡಿಗೆ
ಬಲಿಯಾಗಿ ಬಿದ್ದೆ ನಾ ಗುಂಡಿಗೆ!
ನೀ ಹೊರಟೆ; ಚೂರಾಯ್ತು ನನ್ನ ಗುಂಡಿಗೆ,
ನಾನೀಗ ಶರಣು ಗುಂಡಿಗೆ!
ನಿನ್ನ ನೋಟದ ಗುಂಡಿಗೆ
ಬಲಿಯಾಗಿ ಬಿದ್ದೆ ನಾ ಗುಂಡಿಗೆ!
ನೀ ಹೊರಟೆ; ಚೂರಾಯ್ತು ನನ್ನ ಗುಂಡಿಗೆ,
ನಾನೀಗ ಶರಣು ಗುಂಡಿಗೆ!
09 January 2011
ಚಟಾಕಿ-LOVE
ವಿಜ್ಞಾನಿಯೊಬ್ಬ ತನ್ನ ಪ್ರೀತಿಯನ್ನು ಹೀಗೆ ವಿವರಿಸಬಹುದು..
ನನ್ನ ಪ್ರೀತಿ ಪ್ಲಾಸ್ಟಿಕ್ ನಂತೆ
ಎಂದೆಂದೂ ಕೊಳೆಯದೆ
ಮಣ್ಣಲ್ಲಿ ಕರಗದೆ ಕಾಯುವುದು ನಿನಗಾಗಿ ಚೆನ್ನೆ,
ಸುಟ್ಟರೂ ಹೊಗೆಯಾಗಿ, ಉಸಿರಾಗಿ ಸೇರುವೆನು ನಿನ್ನೇ.
ನನ್ನ ಪ್ರೀತಿ ಮರದ ಎಲೆಯಂತೆ
ನಿನಗಾಗಿ ಚಿಗುರಿ
ನಿನ್ನ ನೋವಿನ ಕಾರ್ಬನ್ ಡೈಆಕ್ಸೈಡ್ ಹೀರುವೆ,
ನಿನಗೆ ನಲಿವಿನ ಆಕ್ಸಿಜನ್ ನೀಡುವೆ ಚೆಲುವೆ.
ನನ್ನ ಪ್ರೀತಿ ಪ್ಲಾಸ್ಟಿಕ್ ನಂತೆ
ಎಂದೆಂದೂ ಕೊಳೆಯದೆ
ಮಣ್ಣಲ್ಲಿ ಕರಗದೆ ಕಾಯುವುದು ನಿನಗಾಗಿ ಚೆನ್ನೆ,
ಸುಟ್ಟರೂ ಹೊಗೆಯಾಗಿ, ಉಸಿರಾಗಿ ಸೇರುವೆನು ನಿನ್ನೇ.
ನನ್ನ ಪ್ರೀತಿ ಮರದ ಎಲೆಯಂತೆ
ನಿನಗಾಗಿ ಚಿಗುರಿ
ನಿನ್ನ ನೋವಿನ ಕಾರ್ಬನ್ ಡೈಆಕ್ಸೈಡ್ ಹೀರುವೆ,
ನಿನಗೆ ನಲಿವಿನ ಆಕ್ಸಿಜನ್ ನೀಡುವೆ ಚೆಲುವೆ.
MURDER
ಕೊಲೆಯೊಂದರ ಚಿತ್ರಣ ಈ ಕವನದಲ್ಲಿದೆ. ಓದಿ ನೋಡಿ.
ಎಂಟು ಜನರ ಕೊಂದವನ
ಹೆಣದ ಸುತ್ತ ನೂರಾರು ನೊಣ.
ಮೇಲ್ಸೇತುವೆ ಕೆಳಗೆ, ಸ್ಕೈವಾಕ್ ನ ಬದಿಗೆ
ತಲೆ ಒಡೆದು ಕುಳಿತವನ
ಹಣೆಯಿಂದ ಹನಿಯುತಿಹ ರಕ್ತ;
ಆಚೆ ಸ್ಲಮ್ಮಿನ ನಲ್ಲಿ ನೀರಿನಂತೆ.
ರಕ್ತದ ಹೊಳೆ ಹರಿಸಿದವನ ದೇಹ ರಕ್ತಸಿಕ್ತ.
ಯಮನಿಗೂ ಬೇಡದ ಪ್ರೇತ.
ಒಡೆದ ತಲೆಯೊಳಗೆ ಇಣುಕಿದ ನೊಣವು,
ಹುಳುಕು ಮೆದುಳಿಗೆ ಹೆದರಿ, ಹಾರಿತು ದೂರಕೆ.
ಎಂಟು ಜನರ ಕೊಂದವನ
ಹೆಣದ ಸುತ್ತ ನೂರಾರು ನೊಣ.
ಮೇಲ್ಸೇತುವೆ ಕೆಳಗೆ, ಸ್ಕೈವಾಕ್ ನ ಬದಿಗೆ
ತಲೆ ಒಡೆದು ಕುಳಿತವನ
ಹಣೆಯಿಂದ ಹನಿಯುತಿಹ ರಕ್ತ;
ಆಚೆ ಸ್ಲಮ್ಮಿನ ನಲ್ಲಿ ನೀರಿನಂತೆ.
ರಕ್ತದ ಹೊಳೆ ಹರಿಸಿದವನ ದೇಹ ರಕ್ತಸಿಕ್ತ.
ಯಮನಿಗೂ ಬೇಡದ ಪ್ರೇತ.
ಒಡೆದ ತಲೆಯೊಳಗೆ ಇಣುಕಿದ ನೊಣವು,
ಹುಳುಕು ಮೆದುಳಿಗೆ ಹೆದರಿ, ಹಾರಿತು ದೂರಕೆ.
ಚಟಾಕಿ-ನಿದ್ದೆ
ಪುಣ್ಯಕೋಟಿ ಒಂದು ಜನಪ್ರಿಯ ಹಾಡು. ಅದೇ ರಾಗದಲ್ಲಿ ಈ ಕವಿತೆಯನ್ನು ಹಾಡಿ ನೋಡಿ. ನಿದ್ದೆಯನ್ನು ಮೆಚ್ಚುವವರೆಲ್ಲರಿಗೂ
ಇದೂ ಮೆಚ್ಚಿಗೆಯಾಗುತ್ತದೆ ಎಂದು ನಿರೀಕ್ಷಿಸುತ್ತೇನೆ.
ನಿದ್ದೆಯೆಂದರೆ ಆಸೆ ಎನಗೆ
ಮುದ್ದೆ ತಿಂದು ಮಲಗುವೆ.
ನಿದ್ದೆಯಲ್ಲಿ ಬಿದ್ದೆನೆಂದು
ಎದ್ದ ಮೇಲೆ ಕೂಗುವೆ.
ನಿದ್ದೆ ಮುಗಿಸಿ ಎದ್ದ ಮೇಲೆ
ಒದ್ದೆ ಬಟ್ಟೆಯ ಒಗೆಯುವೆ.
ನಿದ್ದೆಯೇ ನನ್ನ ಶಾಂತಿಮಂತ್ರ, ನಿದ್ದೆಯೇ ನನ್ನ ಕಾರ್ಯತಂತ್ರ,
ನಿದ್ದೆಯಿಲ್ಲದೆ ಇದ್ದರಂತೂ ಮೆಚ್ಚನಾ ಒಳ ಆತ್ಮನು.
ಇದೂ ಮೆಚ್ಚಿಗೆಯಾಗುತ್ತದೆ ಎಂದು ನಿರೀಕ್ಷಿಸುತ್ತೇನೆ.
ನಿದ್ದೆಯೆಂದರೆ ಆಸೆ ಎನಗೆ
ಮುದ್ದೆ ತಿಂದು ಮಲಗುವೆ.
ನಿದ್ದೆಯಲ್ಲಿ ಬಿದ್ದೆನೆಂದು
ಎದ್ದ ಮೇಲೆ ಕೂಗುವೆ.
ನಿದ್ದೆ ಮುಗಿಸಿ ಎದ್ದ ಮೇಲೆ
ಒದ್ದೆ ಬಟ್ಟೆಯ ಒಗೆಯುವೆ.
ನಿದ್ದೆಯೇ ನನ್ನ ಶಾಂತಿಮಂತ್ರ, ನಿದ್ದೆಯೇ ನನ್ನ ಕಾರ್ಯತಂತ್ರ,
ನಿದ್ದೆಯಿಲ್ಲದೆ ಇದ್ದರಂತೂ ಮೆಚ್ಚನಾ ಒಳ ಆತ್ಮನು.
ಶ್ರೀರಾಮ
ಶ್ರೀರಾಮನ ಮೇಲೆ ನನಗಾವ ಸಿಟ್ಟೂ ಇಲ್ಲ. ಆದರೆ ರಾಮನ ಕಡೆಗೊಂದು ಭಿನ್ನ ನೋಟ.
ರಾಮ?
ಕೊಟ್ಟ ಮಾತಿಗಾಗಿ ಕಾಡಿಗೆ ಹೋದ,
ತಂದೆಯ ಸಾವಿಗೆ ಕಾರಣನಾದ.
ವಾಲಿಯ ವಧಿಸಿದ ಅಪರಾಧಿ..
ಸುಗ್ರೀವನ ಗೆಳೆಯ; ಕಪಿ ಸೈನ್ಯದ ಒಡೆಯ
ರಾವಣನ ಸಂಹರಿಸಿ ವಿಭೀಶನಗೆ ಪಟ್ಟವ ಕೊಟ್ಟ..
ವರುಷಗಳೇ ಕಾದಿದ್ದ ಸೀತೆಯ ಸುಟ್ಟ.
ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಕರೆತಂದು
ಕಾಡಿಗೆ ಕಳಿಸಿದ ಮರ್ಯಾದ ಪುರುಷೋತ್ತಮ!
ರಾಮ?
ಕೊಟ್ಟ ಮಾತಿಗಾಗಿ ಕಾಡಿಗೆ ಹೋದ,
ತಂದೆಯ ಸಾವಿಗೆ ಕಾರಣನಾದ.
ವಾಲಿಯ ವಧಿಸಿದ ಅಪರಾಧಿ..
ಸುಗ್ರೀವನ ಗೆಳೆಯ; ಕಪಿ ಸೈನ್ಯದ ಒಡೆಯ
ರಾವಣನ ಸಂಹರಿಸಿ ವಿಭೀಶನಗೆ ಪಟ್ಟವ ಕೊಟ್ಟ..
ವರುಷಗಳೇ ಕಾದಿದ್ದ ಸೀತೆಯ ಸುಟ್ಟ.
ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಕರೆತಂದು
ಕಾಡಿಗೆ ಕಳಿಸಿದ ಮರ್ಯಾದ ಪುರುಷೋತ್ತಮ!
ಚಟಾಕಿ - ಚಂದಿರ
ಚಂದಿರ ನೀ ಸುಂದರ..
ಚಂದನದ ಚೆಂಡು ಆ ರವಿಯು
ಚಂಡಿ ಹಿಡಿದಂತೆ ಮತ್ತೆ ಸಾಗರದಿ ಮುಳುಗಿರಲು,
ಚಂಚಲ ತಾರೆಗಳು ಬೆಳಗದೆ
ಚಂದುಳ್ಳಿ ಇಳೆಯು ಮತ್ತೆ ಕತ್ತಲಲಿ ಮುಳುಗಿರಲು,
ಚಂದವಾಗಿ ಭೂರಮೆಯ ರಮಿಸಲು ಬಂದ
ಚಂದಿರ ನೀ ಸುಂದರ!
ಚಂದನದ ಚೆಂಡು ಆ ರವಿಯು
ಚಂಡಿ ಹಿಡಿದಂತೆ ಮತ್ತೆ ಸಾಗರದಿ ಮುಳುಗಿರಲು,
ಚಂಚಲ ತಾರೆಗಳು ಬೆಳಗದೆ
ಚಂದುಳ್ಳಿ ಇಳೆಯು ಮತ್ತೆ ಕತ್ತಲಲಿ ಮುಳುಗಿರಲು,
ಚಂದವಾಗಿ ಭೂರಮೆಯ ರಮಿಸಲು ಬಂದ
ಚಂದಿರ ನೀ ಸುಂದರ!
ಮೊದಮೊದಲ ಹನಿಗಳು
ನನ್ನ ಮೆಚ್ಚಿನ ಹನಿಗವಿ ಡುಂಡಿರಾಜ್ ರವರ ಕೆಲ ಹನಿಗಳೊಂದಿಗೆ ಪ್ರಾರಂಭಿಸುತ್ತೇನೆ.
------------------
ಮನುಷ್ಯರ ದೇಹದಲ್ಲಿ
ಎಷ್ಟೊಂದು ಸುಂದರ
ಅಂಗಗಳು!
ಅತ್ಯಂತ ಕೊಳಕು
ಒಂದೇ ಒಂದು
ಮಿದುಳು.
------------
ಕಪ್ಪು ಬಣ್ಣವೆಂದು
ಗೇಲಿ ಮಾಡುವವರಿಗೆ
ಕಾಗೆ ಹೇಳಿತು ಹೀಗೆ:
"ಸುಮ್ಮನೆ ವದವೆಕೆ ನಿಮ್ಮ ಬಳಿ?
ನಾನು ಕಪ್ಪಾದರೂ ನನ್ನ ಹಿಕ್ಕೆ ಬಿಳಿ !"
-----------------
ತುಟಿ ತೊಂಡೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ!
ಏಕೆಂದರೆ ಅದು
ಲವ್ ಹುಟ್ಟುವ ಅಂಗ.
--------------------
------------------
ಮನುಷ್ಯರ ದೇಹದಲ್ಲಿ
ಎಷ್ಟೊಂದು ಸುಂದರ
ಅಂಗಗಳು!
ಅತ್ಯಂತ ಕೊಳಕು
ಒಂದೇ ಒಂದು
ಮಿದುಳು.
------------
ಕಪ್ಪು ಬಣ್ಣವೆಂದು
ಗೇಲಿ ಮಾಡುವವರಿಗೆ
ಕಾಗೆ ಹೇಳಿತು ಹೀಗೆ:
"ಸುಮ್ಮನೆ ವದವೆಕೆ ನಿಮ್ಮ ಬಳಿ?
ನಾನು ಕಪ್ಪಾದರೂ ನನ್ನ ಹಿಕ್ಕೆ ಬಿಳಿ !"
-----------------
ತುಟಿ ತೊಂಡೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ!
ಏಕೆಂದರೆ ಅದು
ಲವ್ ಹುಟ್ಟುವ ಅಂಗ.
--------------------
ಚುಟುಕ,ನಗೆಹನಿ... ಖನಿ
ಚಟಾಕಿ.
ಕನ್ನಡದ ನಗೆಹನಿ, ಚುಟುಕ ಮತ್ತು ಇತರ ಲಘು ಕೃತಿಗಳನ್ನು ಬ್ಲಾಗ್ ರೂಪದಲ್ಲಿ ಒಟ್ಟು ಮಾಡುವ ಪ್ರಯತ್ನ.
ಹಂಚಿದಷ್ಟೂ ಹೆಚ್ಚುವುದು ಸಂತಸ ಮತ್ತು ಜ್ಞಾನ. ಕನ್ನಡದ ಸವಿಯನ್ನು ಹಂಚಿ ಹೆಚ್ಚಿಸುವುದೇ ಈ ಬ್ಲಾಗ್ ನ ಆಶಯ.
ಕನ್ನಡದ ನಗೆಹನಿ, ಚುಟುಕ ಮತ್ತು ಇತರ ಲಘು ಕೃತಿಗಳನ್ನು ಬ್ಲಾಗ್ ರೂಪದಲ್ಲಿ ಒಟ್ಟು ಮಾಡುವ ಪ್ರಯತ್ನ.
ಹಂಚಿದಷ್ಟೂ ಹೆಚ್ಚುವುದು ಸಂತಸ ಮತ್ತು ಜ್ಞಾನ. ಕನ್ನಡದ ಸವಿಯನ್ನು ಹಂಚಿ ಹೆಚ್ಚಿಸುವುದೇ ಈ ಬ್ಲಾಗ್ ನ ಆಶಯ.
Subscribe to:
Comments (Atom)