ಕೊಲೆಯೊಂದರ ಚಿತ್ರಣ ಈ ಕವನದಲ್ಲಿದೆ. ಓದಿ ನೋಡಿ.
ಎಂಟು ಜನರ ಕೊಂದವನ
ಹೆಣದ ಸುತ್ತ ನೂರಾರು ನೊಣ.
ಮೇಲ್ಸೇತುವೆ ಕೆಳಗೆ, ಸ್ಕೈವಾಕ್ ನ ಬದಿಗೆ
ತಲೆ ಒಡೆದು ಕುಳಿತವನ
ಹಣೆಯಿಂದ ಹನಿಯುತಿಹ ರಕ್ತ;
ಆಚೆ ಸ್ಲಮ್ಮಿನ ನಲ್ಲಿ ನೀರಿನಂತೆ.
ರಕ್ತದ ಹೊಳೆ ಹರಿಸಿದವನ ದೇಹ ರಕ್ತಸಿಕ್ತ.
ಯಮನಿಗೂ ಬೇಡದ ಪ್ರೇತ.
ಒಡೆದ ತಲೆಯೊಳಗೆ ಇಣುಕಿದ ನೊಣವು,
ಹುಳುಕು ಮೆದುಳಿಗೆ ಹೆದರಿ, ಹಾರಿತು ದೂರಕೆ.
No comments:
Post a Comment