09 January 2011

ಮೊದಮೊದಲ ಹನಿಗಳು

ನನ್ನ ಮೆಚ್ಚಿನ ಹನಿಗವಿ ಡುಂಡಿರಾಜ್ ರವರ ಕೆಲ ಹನಿಗಳೊಂದಿಗೆ ಪ್ರಾರಂಭಿಸುತ್ತೇನೆ.
------------------
ಮನುಷ್ಯರ ದೇಹದಲ್ಲಿ
ಎಷ್ಟೊಂದು ಸುಂದರ
ಅಂಗಗಳು!
ಅತ್ಯಂತ ಕೊಳಕು
ಒಂದೇ ಒಂದು
ಮಿದುಳು.
------------
ಕಪ್ಪು ಬಣ್ಣವೆಂದು
ಗೇಲಿ ಮಾಡುವವರಿಗೆ
ಕಾಗೆ ಹೇಳಿತು ಹೀಗೆ:
"ಸುಮ್ಮನೆ ವದವೆಕೆ ನಿಮ್ಮ ಬಳಿ?
ನಾನು ಕಪ್ಪಾದರೂ ನನ್ನ ಹಿಕ್ಕೆ ಬಿಳಿ !"
-----------------
ತುಟಿ ತೊಂಡೆ
ಮೂಗು ಸಂಪಿಗೆ
ಕಣ್ಣು ಮಾತ್ರ ಲವಂಗ!
ಏಕೆಂದರೆ ಅದು
ಲವ್ ಹುಟ್ಟುವ ಅಂಗ.
--------------------

No comments:

Post a Comment