Showing posts with label Funny. Show all posts
Showing posts with label Funny. Show all posts

06 February 2011

ನಗದೇ...

ಈ ಹನಿಗಳ ಮೂಲ ನಂಗೊತ್ತಿಲ್ಲ.. ಆದರೆ ನನಗೆ ಮಜಾ ಕೊಟ್ಟ ಚಟಾಕಿಗಳಿವು.
--------
ಆರೋಗ್ಯವಾಗಿ ಸಂತೋಷವಾಗಿ ಬಾಳಲು
ನಗದೆ ಇರಬಾರದು.
ಆದರೆ ಸುಖವಾಗಿ ನೆಮ್ಮದಿಯಾಗಿ ಬಾಳಲು
ನಗದೇ ಇರಬೇಕು!
----------
ಕವಿಗಳು ಮಾಡುತ್ತಿದ್ದರು ಕಾವ್ಯವಾಚನ.
ಜನರು ನೋಡುತ್ತಿದ್ದರು ಕೈಯವಾಚ್ನ!

01 February 2011

ಇನ್ನೆರಡು ಚಟಾಕಿ

ಕ್ರಿಕೆಟ್ ವಿಶ್ವಕಪ್ ಹತ್ತಿರ ಬರುತಿದೆ. ಈ ಸಂದರ್ಭದಲ್ಲಿ ಈ ಹನಿ ಸೂಕ್ತವೆನಿಸಿತು..
----
ನಮ್ಮ ದೇಶದಿ ಹಾಕಿ, ಟೆನಿಸ್, ಕ್ರಿಕೆಟ್ಟಿದೆ
ಕ್ರಿಕೆಟ್ ಒಂದ ಬಿಟ್ಟು ಮತ್ತೆಲ್ಲವೂ ಕೆಟ್ಟಿದೆ!
-----
ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನ ಯಶಸ್ವಿಯಾಗಲಿ,
ಕನ್ನಡದ ಕಂಪು ಎಲ್ಲೆಲ್ಲು ಹರಡಲಿ. 
ಕನ್ನಡದ ಪ್ರೇಮಿಯೊಬ್ಬ ತನ್ನವಳ ವರ್ಣಿಸುವ ಈ ಹನಿ ನಿಮಗೆ ಖುಷಿ ನೀಡಲಿ..
-----
ನಿನ್ನ ಮನ ಗಣಿತ
ನಿನ್ನ ಕೋಪ ಇಂಗ್ಲಿಷ್
ನಿನ್ನ ಬೇಸರ ವಿಜ್ಞಾನ 
ನಿನ್ನ ನಗು-ಮೊಗ ಸವಿಗನ್ನಡ


15 January 2011

ಗುಂಡಿಗೆ

ಗುಂಡಿಗೆ ಎಂಬ ಒಂದೇ ಪದವನ್ನು ನಾಲ್ಕು ಅರ್ಥದಲ್ಲಿ ಬಳಸಿದ ಚಟಾಕಿ ನಿಮ್ಮ ಮುಂದೆ.
ನಿನ್ನ ನೋಟದ ಗುಂಡಿಗೆ
ಬಲಿಯಾಗಿ ಬಿದ್ದೆ ನಾ ಗುಂಡಿಗೆ!
ನೀ ಹೊರಟೆ; ಚೂರಾಯ್ತು ನನ್ನ ಗುಂಡಿಗೆ,
ನಾನೀಗ ಶರಣು ಗುಂಡಿಗೆ!

09 January 2011

ಚಟಾಕಿ-LOVE

ವಿಜ್ಞಾನಿಯೊಬ್ಬ ತನ್ನ ಪ್ರೀತಿಯನ್ನು ಹೀಗೆ ವಿವರಿಸಬಹುದು..

ನನ್ನ ಪ್ರೀತಿ ಪ್ಲಾಸ್ಟಿಕ್ ನಂತೆ
ಎಂದೆಂದೂ ಕೊಳೆಯದೆ
ಮಣ್ಣಲ್ಲಿ ಕರಗದೆ ಕಾಯುವುದು ನಿನಗಾಗಿ ಚೆನ್ನೆ,
ಸುಟ್ಟರೂ ಹೊಗೆಯಾಗಿ, ಉಸಿರಾಗಿ ಸೇರುವೆನು ನಿನ್ನೇ.

ನನ್ನ ಪ್ರೀತಿ ಮರದ ಎಲೆಯಂತೆ
ನಿನಗಾಗಿ ಚಿಗುರಿ
ನಿನ್ನ ನೋವಿನ ಕಾರ್ಬನ್ ಡೈಆಕ್ಸೈಡ್ ಹೀರುವೆ,
ನಿನಗೆ ನಲಿವಿನ ಆಕ್ಸಿಜನ್ ನೀಡುವೆ ಚೆಲುವೆ.

ಚಟಾಕಿ-ನಿದ್ದೆ

ಪುಣ್ಯಕೋಟಿ ಒಂದು ಜನಪ್ರಿಯ ಹಾಡು. ಅದೇ ರಾಗದಲ್ಲಿ ಈ ಕವಿತೆಯನ್ನು ಹಾಡಿ ನೋಡಿ. ನಿದ್ದೆಯನ್ನು ಮೆಚ್ಚುವವರೆಲ್ಲರಿಗೂ
ಇದೂ ಮೆಚ್ಚಿಗೆಯಾಗುತ್ತದೆ ಎಂದು ನಿರೀಕ್ಷಿಸುತ್ತೇನೆ.

ನಿದ್ದೆಯೆಂದರೆ ಆಸೆ ಎನಗೆ
ಮುದ್ದೆ ತಿಂದು ಮಲಗುವೆ.
ನಿದ್ದೆಯಲ್ಲಿ ಬಿದ್ದೆನೆಂದು
ಎದ್ದ ಮೇಲೆ ಕೂಗುವೆ.
ನಿದ್ದೆ ಮುಗಿಸಿ ಎದ್ದ ಮೇಲೆ
ಒದ್ದೆ ಬಟ್ಟೆಯ ಒಗೆಯುವೆ.
ನಿದ್ದೆಯೇ ನನ್ನ ಶಾಂತಿಮಂತ್ರ, ನಿದ್ದೆಯೇ ನನ್ನ ಕಾರ್ಯತಂತ್ರ,
ನಿದ್ದೆಯಿಲ್ಲದೆ ಇದ್ದರಂತೂ ಮೆಚ್ಚನಾ ಒಳ ಆತ್ಮನು.