ಹೀಗೊಂದು ಕನಸು ಬಿತ್ತೆನಗೆ...
ಓದಿ ನೋಡಿ; ಖುಷಿಯಾಗಬಹುದು ನಿಮಗೆ.
-----
ಅವಳ ಕಣ್ಣ ಕಾಂತಿಯು
ನನ್ನೆದೆಯ ಗೋಡೆಯ ಸೀಳಿ
ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ..
ಆ ಬೆಳಕಲಿ ಕಂಡೆನವಳ
ಮೊಗವ, ಆ ಮುದ್ದು ನಗುವ
ಕಣ್ಣು ಮಿಟುಕಿಸಿ, ತೆರೆದು ನೋಡಲು ಬೆಳಗು ಮೂಡಿದೆ ಜಗದೊಳು..
ಛೆ! ಮತ್ತೆ ಕತ್ತಲು ಮನದೊಳು...
Showing posts with label Rheotic. Show all posts
Showing posts with label Rheotic. Show all posts
19 January 2011
15 January 2011
ಗುಂಡಿಗೆ
ಗುಂಡಿಗೆ ಎಂಬ ಒಂದೇ ಪದವನ್ನು ನಾಲ್ಕು ಅರ್ಥದಲ್ಲಿ ಬಳಸಿದ ಚಟಾಕಿ ನಿಮ್ಮ ಮುಂದೆ.
ನಿನ್ನ ನೋಟದ ಗುಂಡಿಗೆ
ಬಲಿಯಾಗಿ ಬಿದ್ದೆ ನಾ ಗುಂಡಿಗೆ!
ನೀ ಹೊರಟೆ; ಚೂರಾಯ್ತು ನನ್ನ ಗುಂಡಿಗೆ,
ನಾನೀಗ ಶರಣು ಗುಂಡಿಗೆ!
ನಿನ್ನ ನೋಟದ ಗುಂಡಿಗೆ
ಬಲಿಯಾಗಿ ಬಿದ್ದೆ ನಾ ಗುಂಡಿಗೆ!
ನೀ ಹೊರಟೆ; ಚೂರಾಯ್ತು ನನ್ನ ಗುಂಡಿಗೆ,
ನಾನೀಗ ಶರಣು ಗುಂಡಿಗೆ!
09 January 2011
ಚಟಾಕಿ - ಚಂದಿರ
ಚಂದಿರ ನೀ ಸುಂದರ..
ಚಂದನದ ಚೆಂಡು ಆ ರವಿಯು
ಚಂಡಿ ಹಿಡಿದಂತೆ ಮತ್ತೆ ಸಾಗರದಿ ಮುಳುಗಿರಲು,
ಚಂಚಲ ತಾರೆಗಳು ಬೆಳಗದೆ
ಚಂದುಳ್ಳಿ ಇಳೆಯು ಮತ್ತೆ ಕತ್ತಲಲಿ ಮುಳುಗಿರಲು,
ಚಂದವಾಗಿ ಭೂರಮೆಯ ರಮಿಸಲು ಬಂದ
ಚಂದಿರ ನೀ ಸುಂದರ!
ಚಂದನದ ಚೆಂಡು ಆ ರವಿಯು
ಚಂಡಿ ಹಿಡಿದಂತೆ ಮತ್ತೆ ಸಾಗರದಿ ಮುಳುಗಿರಲು,
ಚಂಚಲ ತಾರೆಗಳು ಬೆಳಗದೆ
ಚಂದುಳ್ಳಿ ಇಳೆಯು ಮತ್ತೆ ಕತ್ತಲಲಿ ಮುಳುಗಿರಲು,
ಚಂದವಾಗಿ ಭೂರಮೆಯ ರಮಿಸಲು ಬಂದ
ಚಂದಿರ ನೀ ಸುಂದರ!
Subscribe to:
Posts (Atom)